ಶಿವ ಪುರಾಣ ಅಥವಾ ಶಿವ ಮಹಾಪುರಾಣ ಶಿವನಿಗೆ ಸಮರ್ಪಿತ ಪುರಾಣಗಳ ಪೈಕಿ ಒಂದು. ಈ ಪಠ್ಯದ ವಾಯವೀಯ ಸಂಹಿತಾದಲ್ಲಿ ಹೇಳಲಾಗಿರುವ ಒಂದು ಸಂಪ್ರದಾಯದ ಪ್ರಕಾರ, ಮೂಲ ಪಠ್ಯವು ಶೈವ ಪುರಾಣ ಎಂದು ಪರಿಚಿತವಾಗಿತ್ತು. ಶಿವ ಪುರಾಣವನ್ನು ವೇದವ್ಯಾಸರು ರಚಿಸಿದರು ಎಂದು ಹೇಳಲಾಗಿದೆ.ಶಿವ ಪುರಾಣವು ಹಿಂದುಗಳ ಹದಿನೆಂಟು ಪುರಾಣಗಳಲ್ಲಿ ಒಂದು. ಈ ಪುರಾಣವು ಶಿವ ಮತ್ತು ಪಾರ್ವತಿಯನ್ನು ಕುರಿತು ಬರೆಯಲಾಗಿದೆ. ಶಿವ ಪುರಾಣವನ್ನು ಹನ್ನೆರಡು ಸಂಹಿತಿಗಳಾಗಿ ವಿಂಗಡಿಸಲಾಗಿದೆ. ೧೯-೨೦ನೇ ಶತಮಾನಗಳಲ್ಲಿ ವಾಯು ಪುರಾಣವನ್ನು ಶಿವ ಪುರಾಣವಾಗಿ ಪರಿಗಣಿಸಲಾಗಿತ್ತು ಆನಂತರ ಈ ಪುರಾಣಗಳೆರಡು ಬೇರೆ ವಿಷಯವನ್ನು ಹೊಂದಿರುವುದರಿಂದ ಒಂದನ್ನು ಮಹಾ ಪುರಾಣ ಮತ್ತೊಂದನ್ನು ಉಪ ಪುರಾಣವೆಂದು ಪರಿಗಣಿಸಲಾಗಿತ್ತು. == ನೋಡಿ == ಶಿವ - ಬ್ರಹ್ಮ - ವಿಷ್ಣು ಪುರಾಣಗಳು == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == , ,